Chief Editor
Manohar. R (Manu)
Photo Journalist
chitrataramanu@gmail.com
+91 9845549026
ದೈವಶಕ್ತಿಯ ಮುಂದೆದುಷ್ಟಶಕ್ತಿ ಆಟ ನಡೆಯೊಲ್ಲ
Posted date: 28 Sat, Sep 2019 – 02:34:12 PM

ದೇವರುಇರುವಜಾಗದಲ್ಲಿ ಏನೇ ಕೆಲಸ ಮಾಡಿದರೂಆಪತ್ತನ್ನುತಂದುಕೊಡಂತೆಆಗುತ್ತದೆ.ಅಂತಹುದೆಘಟನೆಗಳು  ನವರಾತ್ರಿ ಸಿನಿಮಾದಲ್ಲಿ ಬರುತ್ತದೆ.  ಗತಕಾಲದಲ್ಲಿದೇವರನ್ನು  ಪೂಜಿಸುವ ಭಕ್ತರು ಸಾಕಷ್ಟು ಮಂದಿ ಇದ್ದರು. ಅಲ್ಲಿನ ವಾತವರಣ, ಹಳ್ಳಿಯ ಸುಂದರ ಪರಿಸರ ಎಲ್ಲರಿಗೂ ನೆಮ್ಮದಿಯ ಜೀವನ ಕಟ್ಟಿಕೊಟ್ಟಿತ್ತು. ಆದರೆ ನಾವುಗಳು ಇಂದಿನ ಯಾಂತ್ರಿಕ ಬದುಕಿನಲ್ಲಿ  ಪ್ರತಿಯೊಂದನ್ನು ವ್ಯಾವಹಾರಿಕವಾಗಿ ನೋಡುತ್ತಿರುವುದರಿಂದ ಮಿಕ್ಕಲ್ಲೆವುಗೌಣಎನ್ನುವಂತೆ ಭಾಸವಾಗುತ್ತದೆ. ಕತೆಯಲ್ಲಿ ಒಂದಷ್ಟುಗೆಳಯರು  ಪೂರ್ಣಗೊಳ್ಳದ ಆಪಾರ್ಟ್‌ಮೆಂಟ್  ಒಳಗೆ ಹೋಗುತ್ತಾರೆ. ನಾಯಕನ ಅಣ್ಣನಜಾಗವಾಗಿದ್ದರಿಂದ ಮಸ್ತಿ ಮಾಡಲು ಬರುತ್ತಾರೆ.ಇದರ ನಡುವೆ ಬೇರೆ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಅಪಾರ್ಟ್ಮೆಂಟ್‌ನ್ನು ಮಾರಲು ನಿರ್ದರಿಸಿದಾಗ ಅಡತಡೆಗಳು ಒದಗಿ ಬಂದು ಮನೆಯಲ್ಲಿ ದೆವ್ವ ಇದೆ ಅಂತ ತಿಳಿದುಕೊಳ್ಳುತ್ತಾನೆ. ಇದಲ್ಲದೆ ಅಗೋಚರ ಶಕ್ತಿಯೊಂದು ಎಲ್ಲರನ್ನು ದಿಗ್ಬ್ರಾಂತಿಗೆಕರೆದುಕೊಂಡು ಹೋಗುತ್ತದೆ.  ಮತ್ತು ಪ್ರಚಲಿತಯುಗದಲ್ಲಿ ನಮ್ಮನ್ನು ನಾವು ಮರೆಯುತ್ತಿದ್ದೇವೆ. ದೇವರ ಬಗ್ಗೆ ಭಕ್ತಿತೋರದೆ ನಮ್ಮತನದದುಷ್ಟ ಶಕ್ತಿಯನ್ನು ರೂಡಿಸಿಕೊಂಡು ಹೋಗುವವರಿಗೆತಕ್ಕ ಪಾಠ ಕಲಿಸುವುದೇ ಸಿನಿಮಾದ ಸಾರಾಂಶವಾಗಿದೆ.
ತ್ರಿವಿಕ್ರಮ ನಾಯಕನಾಗಿ ನ್ಯಾಯ ಒದಗಿಸಿದ್ದಾರೆ. ನಾಯಕಿ ಹೃದಯ ಆವಂತಿಕಾ  ತಾನೇನು ಕಮ್ಮಿಇಲ್ಲದಂತೆ ನಟಿಸಿದ್ದಾರೆ.ಉಳಿದಂತೆ ನಿರ್ಮಾಪಕ, ಕಲಾವಿದರು ಅಚ್ಚು ಕಟ್ಟಾಗಿ ಪಾತ್ರಕ್ಕೆ ಜೀವತುಂಬಿದ್ದಾರೆ.ಅದರಲ್ಲೂ ನೋಡುಗರನ್ನು ನಗಿಸಿರುವ ಶಿವುಮಂಜು-ಕಾರ್ತಿಕ್ ಜುಗಲ್‌ ಬಂದಿಯಲ್ಲಿ ಬಂದಿರುವ ಡೈಲಾಗ್‌ಗಳು ಪ್ಲಸ್ ಪಾಯಿಂಟ್‌ ಆಗಿದೆ. ಈಗಾಗಲೇ ಹಲವು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಶಿವಮಂಜು ಅವರಿಗೆ ಇದರ ಮೂಲಕ ಉತ್ತಮ ಭವಿಷ್ಯ ಬಂದರೂ ಅಚ್ಚರಿಯೇನಿಲ್ಲ. ನಿರ್ದೇಶಕ ಲಕ್ಷೀಕಾಂತ್‌ ಚೆನ್ನ ಕನ್ನಡಿಗರು ಇಷ್ಟಪಡುವಂತಕತೆ ನೀಡಿದ್ದಾರೆ. ನರೇಶ್‌ಕುಮಾರ್ ಸಂಗೀತ ಮತ್ತು ಹಿನ್ನಲೆ ಶಬ್ದ ಇದಕ್ಕೆ ಪೂರಕವಾಗಿದೆ.ಸಮಯರೆಡ್ಡಿ ಮತ್ತು ವಂಶಿಮೋಹನ್‌ ರೆಡ್ಡಿ ನಿರ್ಮಾಣ ಮಾಡಿರುವಚಿತ್ರವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ದೈವಶಕ್ತಿಯ ಮುಂದೆದುಷ್ಟಶಕ್ತಿ ಆಟ ನಡೆಯೊಲ್ಲ - Chitratara.com
Copyright 2009 chitratara.com Reproduction is forbidden unless authorized. All rights reserved.